ಸಿದ್ಧರಾಮಯ್ಯ ಗ್ರಾಮ ತಿಮ್ಮಾಪುರ-ಗದಗ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಯೊಂದು ಸಾಧನೆಗೂ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ವಿಶೇಷ ಆಚರಣೆಗಳು ನಡೆಯುತ್ತೆ. ದೇವರಾಜ ಅರಸು ಅವರನ್ನು ಹಿಂದಿಕ್ಕುವ ಮೂಲಕ ಸಿದ್ದರಾಮಯ್ಯ ಅವರು ರಾಜ್ಯದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ದಾಖಲೆ ರಚಿಸಿದ್ದಾರೆ.
ಗ್ರಾಮಸ್ಥರು ಗ್ರಾಮದ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಎಲ್ಲರಿಗೂ ಸಿಹಿ ಹಂಚಿದರು. ತಿಮ್ಮಾಪುರವನ್ನು ಸಿದ್ದರಾಮಯ್ಯ ಗ್ರಾಪಂ ಎಂದು ಕರೆಯುವುದು ಸುಳ್ಳಲ್ಲ, ಬಹುತೇಕ ಇಲ್ಲಿನ ನಿವಾಸಿಗಳೆಲ್ಲರೂ ಸಿಎಂ ಅಭಿಮಾನಿಗಳೇ.